ಶೆಂಝೌ ೭ (ಪಾರಂಪರಿಕ ಚೀನಿ: 神舟七號 ; ಸರಳೀಕೃತ ಚೀನಿ: 神舟七号 ; ಶೇನ್‌ಜೌ ಖೀಹಾವ್) ಇದು ಚೀನಾ ದೇಶದ ಮಾನವರನ್ನು ಹೊತ್ತೊಯ್ದ ಮೂರನೆಯ ಅಂತರಿಕ್ಷ ನೌಕೆ. ಈ ಉಡಾವಣೆಯೊಂದಿಗೆ 'ಪ್ರೊಜೆಕ್ಟ್ ೯೨೧'ರ ಎರಡನೇಯ ಹಂತ ಪ್ರಾರಂಭವಾಯಿತು. ಶೆಂಝೌ ಅಂತರಿಕ್ಷ ನೌಕೆಯನ್ನು ಉಪಯೋಗಿಸುವ ಇದು ಸೆಪ್ಟೆಂಬರ್ ೨೫, ೨೦೦೮ರಂದು ಲಾಂಗ್ ಮಾರ್ಚ್ ೨ಎಫ್ (ಸಿಝಿ-೨ಎಫ್) ಉಡಾವಣಾ ನೌಕೆಯ ಮೂಲಕ ಹಾರಿಸಲಾಯಿತು. == ತಂಡ == ಝೈ ಝಿಗ್ಯಾಂಗ್ (ಕಮಾಂಡರ್) ಲಿಯು ಬೊಮಿಂಗ್ ಜಿಂಗ್ ಹೈಪೆಂಗ್ === ಹಿಂಪಡೆ ತಂಡ === ಚೆನ್ ಕುವಾನ್ ಫೈ ಜುನ್ ಲಾಂಗ್ ನೈ ಹೈಷೆಂಗ್ == ಉಡಾವಣೆಯ ಮುಖ್ಯಾಂಶಗಳು == ಈ ಅಂತರಿಕ್ಷ ನೌಕೆಯಲ್ಲಿ ಮೂವರು ಗಗನಯಾತ್ರಿಗಳಿದ್ದಾರೆ, ಇಷ್ಟು ಚೈನಿ ಗಗನಯಾತ್ರಿಗಳು ಒಟ್ಟಿಗೆ ಹೊರಟಿರುವದು ಮೊದಲ ಬಾರಿ. ಇನ್ನೂ ಮೂವರು ಗಗನಯಾತ್ರಿಗಳು ಹಿಂಪಡೆ ತಂಡದಲ್ಲಿರುತ್ತಾರೆ. ಗಗನನೌಕೆಯ ಹೊರಗೆ ನಡೆಯುವ ಕಾರ್ಯಗಳಿಗಾಗಿ ಅತ್ಯಾಧುನಿಕ ಗಗನಕವಚವನ್ನು ನಿರ್ಮಿಸಲಾಗಿದೆ.